ಕರ್ನಾಟಕದ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳು - ಪೌಷ್ಟಿಕಾಂಶ ಮತ್ತು ಆಯುರ್ವೇದ ದೃಷ್ಟಿಕೋನ
ಭಾರತ ದೇಶವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಾಡು. ಕರ್ನಾಟಕವು ಅದಕ್ಕೆ ಹೊರತಲ್ಲ. ನಮ್ಮ ದೇಶ ಮತ್ತು ನಾಡು ಶ್ರೀಮಂತ ಆಹಾರ ಪರಂಪರೆಗೂ ಪ್ರಸಿದ್ಧ. ಕರ್ನಾಟಕದ ವಿವಿಧ ಪ್ರಾಂತ್ಯಗಳು ಮತ್ತು ವಿವಿಧ ಜನಾಂಗಗಳು ತಮ್ಮದೇ ಆದ ವಿಶಿಷ್ಟ ಸಾಂಪ್ರದಾಯಕ ಅಡುಗೆಗಳನ್ನ ಹೊಂದಿವೆ. ಕರ್ನಾಟಕ ರಾಜ್ಯದಲ್ಲಿ ಅನೇಕ ರೀತಿಯ ಆಹಾರ ಫದ್ಧತಿಗಳಿವೆ. ಹಲವೊಂದು ಹಬ್ಬದ ತಿನಸುಗಳು ಅಥವಾ ಉತ್ಸವದ ಸಾಂಪ್ರದಾಯಿಕ ಆಚರಣೆಗಳೊಡನ ಅವಿನಾಭಾವ ಸಂಬಂಧವನ್ನು ಹೊಂದಿವೆ. ಉಡುಪಿ ಮತ್ತು ಮಂಗಳೂರಿನ ಕರಾವಳಿ ಸಿಹಿತಿಂಡಿಗಳು, ಮೈಸೂರಿನ ಪರಿಮಳ ಪಾಕಪದ್ಧತಿ, ಮತ್ತು ಉತ್ತರ ಕರ್ನಾಟಕದ ಮಸಾಲೆಯುಕ್ತ ಆಹಾರಗಳು ಬಹು ಪ್ರಸಿದ್ಧವಾಗಿವೆ. ಹೆಚ್ಚಿನ ಸಾಂಪ್ರದಾಯಿಕ ಪಾಕಪದ್ಧತಿಗಳು ಬರೀ ಆಹಾರವಲ್ಲ, ಅವು, ಸುಲಭ ಮನೆಮದ್ದುಗಳು ಕೂಡಾ ಆಗಿವೆ. ಆದರೆ ಕ್ರಮೇಣ, ನಮ್ಮ ಸಾಂಪ್ರದಾಯಿಕ ಆಹಾರಗಳು ಜನಮಾನದಿಂದ ನಶಿಸಿ ಹೋಗುತ್ತಿವೆ.
ಈ ನಿಟ್ಟಿನಲ್ಲಿ,ಆಹಾರಗಳು ಕ್ರಮಬದ್ಧವಾಗಿ ಧಾಖಲಿಕೊಳ್ಳುವುದು, ನಮ್ಮ ಮುಂದಿನ ಪೀಳಿಗೆಗಾಗಿ ಕಾಪಡುವುದು ಮತ್ತು ಯುವ ಜನತೆಗೆ ಸುಲಭವಾಗಿ ತಿಳಿಯುವಂತೆ ಮಾಡುವುದು ಅತ್ಯಗತ್ಯ.
ಈ ನಿಟ್ಟಿನಲ್ಲಿ, “ಕರ್ನಾಟಕದ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳು - ಪೌಷ್ಟಿಕಾಂಶ ಮತ್ತು ಆಯುರ್ವೇದ ದೃಷ್ಟಿಕೋನ" ಎಂಬ ಒಂದು ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (CARI) ಮತ್ತು ಟ್ರಾನ್ಸ್‌ಡಿಸಿಪ್ಲಿನರಿ ವಿಶ್ವವಿದ್ಯಾಲಯ (TDU) ನಡುವಿನ ಈ ಜಂಟಿ ಯೋಜನೆಯು ಕೇಂದ್ರೀಯ ಆಯುರ್ವೇದ ವಿಜ್ಞಾನ ಅನುಸಂಧಾನ ಪರಿಷತ್ (CCRAS) ಮೂಲಕ ಧನ ಸಹಾಯವನ್ನು ಹೊಂದಿದೆ. ಈ ಯೋಜನೆಯಲ್ಲಿ ಕರ್ನಾಟಕದ 22 ಜಿಲ್ಲೆಗಳ, ಸಾಂಪ್ರದಾಯಿಕ ಮತ್ತು ಪರಂಪರಾಗತ ಅಡುಗೆಗಳು ಮತ್ತು ವೈಶಿಷ್ಟ್ಯಪೂರ್ಣ ಪಾಕಪದ್ಧತಿಗಳ ದಾಖಲಾತಿಯನ್ನು ಮಾಡುವ ಪ್ರಯತ್ನದಲ್ಲಿದ್ದೇವೆ
ಇಲ್ಲಿ ಕರ್ನಾಟಕ ರಾಜ್ಯದಿಂದ ಸುಮಾರು 100 ಸಾಂಪ್ರದಾಯಿಕ ಪಾಕವಿಧಾನಗಳ ಪೌಷ್ಟಿಕಾಂಶ ಮತ್ತು ಆಯುರ್ವೇದದ ಪ್ರಾಮುಖ್ಯತೆಯನ್ನು ತಿಳಿದುಕೊಂಡು, ಆಹಾರ, ಆರೋಗ್ಯ ಮತ್ತು ಸಂಸ್ಕೃತಿಯ ನಡುವಿನ ಆಳವಾದ ಸಂಬಂಧ ದಾಖಲಿಸಲಾಗುತ್ತದೆ. ಇಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು e-ಪುಸ್ತಕದ ರೂಪದಲ್ಲಿ ಮತ್ತು ವಿಡಿಯೋಗಳನ್ನು YouTube ಚಾನಲ್ ಮೂಲಕ ಜನರಿಗೆ ತಲುಪಿಸಲಾಗುತ್ತದೆ.
ನೀವು ಈ ಫಾರ್ಮ್‌ನಲ್ಲಿ ಒದಗಿಸಿದ ಮಾಹಿತಿಗಳನ್ನು ನಾವು ಕೇವಲ ಈ ಯೋಜನೆಯ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತೇವೆ.
ನಿಮ್ಮ ಒಪ್ಪಿಗೆ ಇದ್ದರೆ ಇನ್ನುಳಿದ ಮಾಹಿತಿಗಾಗಿ, ನಾವು ಇಮೇಲ್/ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಬಹುದು.
Traditional Foods of Karnataka - Respondent Details - Form
ಕರ್ನಾಟಕದ ಸಾಂಪ್ರದಾಯಿಕ ಅಡುಗೆ/ಆಹಾರಗಳು ಮತ್ತು ಅವರ ಸಮುದಾಯದ ಆಚರಣೆಗಳ ಬಗ್ಗೆ ಆಸಕ್ತಿ ಇರುವ ಸದಸ್ಯರ ಕೆಲವು ಮಾಹಿತಿಗಳನ್ನು ಈ ಫಾರಂ ನ ಮೂಲಕ ಸಂಗ್ರಹಿಸಿ ನಂತರ, ಅವರನ್ನು ಸಂಪರ್ಕಿಸಲು ಉದ್ದೇಶಿಸಲಾಗಿದೆ.
ಸಂಪರ್ಕ ಮಾಹಿತಿ:
JRF- ಸೌರಭ ಪ್ರಭಾ (sourabhprabha@tdu.edu.in) Ph.no. +91 63644 48339
JRF- ವೈಶಾಲಿ ಜಾಧವ್ (vaishalijadav@tdu.edu.in) Ph.no. +91 63644 98339
ಸಂಶೋಧಕರು: ಡಾ. ಮೇಘಾ (megha@tdu.edu.in) ಮತ್ತು ಡಾ. ಸುಬ್ರಹ್ಮಣ್ಯ (s.kumar@tdu.edu.in)
ಡಾ. ಸುಲೋಚನಾ ಭಟ್ (CARI ಯೋಜನೆ), ಡಾ. ಶುಭಶ್ರೀ ಎಂ. ಎನ್. (CARI ಯೋಜನೆ)

Acting Locally for Global Impact: Reimagining PBRs by Integrating Ecosystem Services
The theme of the International Day for Biological Diversity 2026—“Acting locally for global impact”—is a powerful reminder that global ecological security relies fundamentally on local ecosystems.
Read more

International Day of Forests 2026
Forests are not just natural assets - they are economic lifelines and knowledge systems. Nurturing them is essential for a sustainable and prosperous future for people and planet
Read more

World Wildlife Day 2026
The University of Transdisciplinary Health Sciences and Technology (TDU) Calls for Action to Conserve Medicinal and Aromatic Plants for Health, Heritage and Livelihoods
Read more

Wetlands, Traditional Knowledge and Health : A TDU - FRLHT Perspective
Wetlands are dynamic ecosystems where water meets land, creating rich habitats that support biodiversity, water security, climate resilience and cultural heritage. Observed annually on 2 February, World Wetlands Day commemorates the adoption of the Ramsar Convention (1971) and underscores the essential role wetlands play for both nature and people worldwide.
Read more

International Environmental Education Day (January 26)
On International Environmental Education Day (January 26), we are reminded of a powerful truth: The future of our planet depends on what and how we teach today.
Read more

TDU VC Darshan Shankar pays tribute to Prof. Madhav Gadgil
Read more



