ಭಾರತ ದೇಶವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಾಡು. ಕರ್ನಾ ಟಕವು ಅದಕ
್ಕೆ ಹೊರತಲ್ಲ. ನಮ್ಮ ದೇಶ ಮತ್ತು ನಾಡು ಶ್ರೀಮಂತ ಆಹಾರ ಪರಂಪರೆಗೂ ಪ್ರಸಿದ್ಧ. ಕರ್ನಾಟಕದ ವಿವಿಧ ಪ್ರಾಂತ್ಯಗಳು ಮತ್ತು ವಿವಿಧ ಜನಾಂಗಗಳು ತಮ್ಮದೇ ಆದ ವಿಶಿಷ್ಟ ಸಾಂಪ್ರದಾಯಕ ಅಡುಗೆಗಳನ್ನ ಹೊಂದಿವೆ. ಕರ್ನಾಟಕ ರಾಜ್ಯದಲ್ಲಿ ಅನೇಕ ರೀತಿಯ ಆಹಾರ ಫದ್ಧತಿಗಳಿವೆ. ಹಲವೊಂದು ಹಬ್ಬದ ತಿನಸುಗಳು ಅಥವಾ ಉತ್ಸವದ ಸಾಂಪ್ರದಾಯಿಕ ಆಚರಣೆಗಳೊಡನ ಅವಿನಾಭಾವ ಸಂಬಂಧವನ್ನು ಹೊಂದಿವೆ. ಉಡುಪಿ ಮತ್ತು ಮಂಗಳೂರಿನ ಕರಾವಳಿ ಸಿಹಿತಿಂಡಿಗಳು, ಮೈಸೂರಿನ ಪರಿಮಳ ಪಾಕಪದ್ಧತಿ, ಮತ್ತು ಉತ್ತರ ಕರ್ನಾಟಕದ ಮಸಾಲೆಯುಕ್ತ ಆಹಾರಗಳು ಬಹು ಪ್ರಸಿದ್ಧವಾಗಿವೆ. ಹೆಚ್ಚಿನ ಸಾಂಪ್ರದಾಯಿಕ ಪಾಕಪದ್ಧತಿಗಳು ಬರೀ ಆಹಾರವಲ್ಲ, ಅವು, ಸುಲಭ ಮನೆಮದ್ದುಗಳು ಕೂಡಾ ಆಗಿವೆ. ಆದರೆ ಕ್ರಮೇಣ, ನಮ್ಮ ಸಾಂಪ್ರದಾಯಿಕ ಆಹಾರಗಳು ಜನಮಾನದಿಂದ ನಶಿಸಿ ಹೋಗುತ್ತ
ಿವೆ. ಈ ನಿಟ್ಟಿನಲ್ಲಿ,ಆಹಾರಗಳು ಕ್ರಮಬದ್ಧವಾಗಿ ಧಾಖಲಿಕೊಳ್ಳುವುದು, ನಮ್ಮ ಮುಂದಿನ ಪೀಳಿಗೆಗಾಗಿ ಕಾಪಡುವುದು ಮತ್ತು ಯುವ ಜನತೆಗೆ ಸುಲಭವಾಗಿ ತಿಳಿಯುವಂತೆ ಮಾಡುವುದು ಅತ್ಯಗತ್ಯ.
ಈ ನಿಟ್ಟಿನಲ್ಲಿ, “ಕರ್ನಾಟಕದ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳು - ಪೌಷ್ಟಿಕಾಂಶ ಮತ್ತು ಆಯುರ್ವೇದ ದೃಷ್ಟಿಕೋನ" ಎಂಬ ಒಂದು ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (CARI) ಮತ್ತು ಟ್ರಾನ್ಸ್‌ಡಿಸಿಪ್ಲಿನರಿ ವಿಶ್ವವಿದ್ಯಾಲಯ (TDU) ನಡುವಿನ ಈ ಜಂಟಿ ಯೋಜನೆಯು ಕೇಂದ್ರೀಯ ಆಯುರ್ವೇದ ವಿಜ್ಞಾನ ಅನುಸಂಧಾನ ಪರಿಷತ್ (CCRAS) ಮೂಲಕ ಧನ ಸಹಾಯವನ್ನು ಹೊಂದಿದೆ. ಈ ಯೋಜನೆಯಲ್ಲಿ ಕರ್ನಾಟಕದ 22 ಜಿಲ್ಲೆಗಳ, ಸಾಂಪ್ರದಾಯಿಕ ಮತ್ತು ಪರಂಪರಾಗತ ಅಡುಗೆಗಳು ಮತ್ತು ವೈಶಿಷ್ಟ್ಯಪೂರ್ಣ ಪಾಕಪದ್ಧತಿಗಳ ದಾಖಲಾತಿಯನ್ನು ಮಾಡುವ ಪ್ರಯತ್ನದಲ್ಲಿದ್ದ
ೇವೆ. ಇಲ್ಲಿ ಕರ್ನಾಟಕ ರಾಜ್ಯದಿಂದ ಸುಮಾರು 100 ಸಾಂಪ್ರದಾಯಿಕ ಪಾಕವಿಧಾನಗಳ ಪೌಷ್ಟಿಕಾಂಶ ಮತ್ತು ಆಯುರ್ವೇದದ ಪ್ರಾಮುಖ್ಯತೆಯನ್ನು ತಿಳಿದುಕೊಂಡು, ಆಹಾರ, ಆರೋಗ್ಯ ಮತ್ತು ಸಂಸ್ಕೃತಿಯ ನಡುವಿನ ಆಳವಾದ ಸಂಬಂಧ ದಾಖಲಿಸಲಾಗುತ್ತದೆ. ಇಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು e-ಪುಸ್ತಕದ ರೂಪದಲ್ಲಿ ಮತ್ತು ವಿಡಿಯೋಗಳನ್ನು YouTube ಚಾನಲ್ ಮೂಲಕ ಜನರಿಗೆ ತಲುಪಿಸಲಾಗುತ್ತದೆ.
ನೀವು ಈ ಫಾರ್ಮ್‌ನಲ್ಲಿ ಒದಗಿಸಿದ ಮಾಹಿತಿಗಳನ್ನು ನಾವು ಕೇವಲ ಈ ಯೋಜನೆ
ಯ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತೇವೆ. ನಿಮ್ಮ ಒಪ್ಪಿಗೆ ಇದ್ದರೆ ಇನ್ನುಳಿದ ಮಾಹಿತಿಗಾಗಿ, ನಾವು ಇಮೇಲ್/ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಬಹುದು.
ಕರ್ನಾಟಕದ ಸಾಂಪ್ರದಾಯಿಕ ಅಡುಗೆ/ಆಹಾರಗಳು ಮತ್ತು ಅವರ ಸಮುದಾಯದ ಆಚರಣೆಗಳ ಬಗ್ಗೆ ಆಸಕ್ತಿ ಇರುವ ಸದಸ್ಯರ ಕೆಲವು ಮಾಹಿತಿಗಳನ್ನು ಈ ಫಾರಂ ನ ಮೂಲಕ ಸಂಗ್ರಹಿಸಿ ನಂತರ, ಅವ
ರನ್ನು ಸಂಪರ್ಕಿಸಲು ಉದ್ದೇಶಿಸಲಾಗಿದೆ.
ಸಂಪರ್ಕ ಮಾಹಿತಿ:
JRF- ಸೌರಭ ಪ್ರಭಾ (sourabhprabha@tdu.edu.in) Ph.no. +91 63644 48339
JRF- ವೈಶಾಲಿ ಜಾಧವ್ (vaishalijadav@tdu.edu.in) Ph.no. +91 63644 98339
ಸಂಶೋಧಕರು: ಡಾ. ಮೇಘಾ (megha@tdu.edu.in) ಮತ್ತು ಡಾ. ಸುಬ್ರಹ್ಮಣ್ಯ (s.kumar@tdu.edu.in)
ಡಾ. ಸುಲೋಚನಾ ಭಟ್ (CARI ಯೋಜನೆಯ), ಡಾ. ಶುಭಶ್ರೀ ಎಂ. ಎನ್. (CARI ಯೋಜನೆಯ)
Thank You This Is Very Good, Maybe This Can Help You
-----
DOWNLOAD FULL Ebook Very Detail Here
----
DOWNLOAD FULL = https://shorturl.at/MLLfO
----
DOWNLOAD FULL 100+ Recipes Diet Cookbook = https://shorturl.at/v6cLP
baguss